ಚಿತ್ರ: ಶ್ರಾವಣ ಬಂತು
ಸಾಹಿತ್ಯ: ಚಿ.ಉದಯಶಂಕರ್
ಗಾಯನ: ಡಾ.ರಾಜ್‍ಕುಮಾರ್
ಸಂಗೀತ: ಎಂ.ರಂಗರಾವ್

ಹೊಸ ಬಾಳಿನ ಹೊಸಿಲಲಿ ನಿಂತಿರುವ ಹೊಸ ಜೋಡಿಗೆ ಶುಭವಾಗಲಿ
ಹೊಸ ಆಸೆಯ ಕಡಲಿ ತೇಲುತಿಹ ನವ ಜೋಡಿಗೆ ಸುಖವಾಗಲಿ ||ಪಲ್ಲವಿ||

ಆ ಸ್ವರ್ಗದ ಬಾಗಿಲು ತೆರೆದಿದೆ ಇಂದು ಈ ಶುಭವೇಳೆಯಲಿ
ಆ ದೇವತೆಗಳು ಉಲ್ಲಾಸದಿ ಬಂದು ನಿಮ್ಮನು ಹರಸುತಲಿ
ಇದು ಬ್ರಹ್ಮನು ಬೆಸೆದಾ ಅನುಬಂಧ
ಅನುಗಾಲವು ನೀಡಲಿ ಆನಂದ

||ಪಲ್ಲವಿ||

ಈ ಹಚ್ಚನೆ ಹಸುರಿನ ತೋರಣವು ಸುಸ್ವಾಗತವೆಂದೂ ಹೇಳುತಿದೆ
ಈ ಮಂಗಳ ವಾದ್ಯವು ಮೊಳಗಿರಲು ಶುಭಕಾರ್ಯದ ಸಂಭ್ರಮ ಕಾಣುತಿದೆಓರುತಿದೆ
ಜನುಮ ಜನುಮದಾ ಸ್ನೇಹವಿದು ||೨||
ಸಂಸಾರ ಬಾಳಿಗೆ ನಾಂದಿಯಿದು

|ಪಲ್ಲವಿ|

ಈ ಶ್ರಾವಣ ಮಾಸವು ತಂದಾ ಉಡುಗೊರೆ ಉಲ್ಲಾಸವ ತರಲಿ
ಆ ಮಂಜುನಾಥನ ಕೃಪಾಕಟಾಕ್ಷವು ಎಂದೆಂದು ನಿಮಗಿರಲಿ
ಒಂದೇ ವರುಷದ ಅವಧಿಯಲೀ |೨|
ಹಸುಕಂದನು ಮಡಿಲಲಿ ನಗುತಿರಲಿ

|ಪಲ್ಲವಿ|

ವರ್ಗ: ಕನ್ನಡ ಚಿತ್ರಸಾಹಿತ್ಯ
ವರ್ಗ: ಶ್ರಾವಣ ಬಂತು ಚಿತ್ರ
ವರ್ಗ: ಚಿ.ಉದಯಶಂಕರ್ ಸಾಹಿತ್ಯ
ವರ್ಗ: ಡಾ.ರಾಜ್‍ಕುಮಾರ್ ಗಾಯನವರ್ಗ:ಡಾ.ರಾಜ್‍ಕುಮಾರ್ ಗಾಯನ